Monday, October 9, 2017

*ಭಾಗ 06*

*ಶಂಸುಲ್ ಉಲಮಾ 'ಸಮಸ್ತ' ಇಭ್ಬಾಗವಾಗುವ ಮುಂಚೆ ಮತ್ತು ನಂತರ*
*————————————*

✒✒ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ✒✒

-----------           -----------

16-6-79 ರಂದು ಸೇರಿದ ಸಮಸ್ತ ಮುಶಾವರ ತೀರ್ಮಾನ ಸರ್ಕ್ಯೂಲರ್ ಕೆಳ ಘಟಕಕ್ಕೆ ತಲುಪಿದ ತಕ್ಷಣ ಕಾರ್ಯಕರ್ತರು ಸಮಸ್ತದ ನಿರ್ದೇಶಗಳನ್ನು ಯಥಾವತ್ತಾಗಿ ಕಾರ್ಯರೂಪಕ್ಕಿಳಿಸಿದಾಗ ಪಂಚಾಯತ್ ಚುನಾವಣೆಯಲ್ಲಿ ಘಟಾನುಘಟಿ ವಹ್ಹಾಬಿ ನಾಯಕರ ಸೊಕ್ಕು ಮುರಿಯಿತು! ಅದರೊಂದಿಗೆ ಅವರು ನಗೆಪಾಟಲಾದರು!
ಆದರೂ ಶಂಸುಲ್ ಉಲಮಾರ ವಿರುದ್ಧ ಬಹಿರಂಗವಾಗಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ.ಹಾಗಾಗಿ ಮಲಪ್ಪುರಂ ಜಿಲ್ಲೆಯ ಆನಮಂಙಾಡ್ ನಿವಾಸಿಯೂ ಆಜಾನುಬಾಹು ವ್ಯಕ್ತಿ ಅಬ್ದುರ್ರಹ್ಮಾನ್ ಬಾಖವಿ ಯನ್ನು ಮುಂದೆ ನಿಲ್ಲುಸಿ,ಶಂಸುಲ್ ಉಲಮಾರ ವಿರುದ್ಧ attack ಮಾಡಲು ಲೀಗ್  ನಿಶ್ಚಯಿಸಿತು.ಹಾಗೆ ಈ ಕೆ ಉಸ್ತಾದರ ವಿರುದ್ಧ ಬಾಖವಿ ಸ್ಟೇಟ್ ಮೆಂಟ್ ಹೊರಡಿಸಲು ಆರಂಭಿಸಿದರು.'ಚಂದ್ರಿಕಾ' ದಿನ ಪತ್ರಿಕೆಯ ಮುಖಪುಟದಲ್ಲಿ ಬಾಖವಿಯ ಸ್ಟೇಟ್ ಮೆಂಟ್ ಗಳು ರಾರಾಜಿಸತೊಡಗಿತು!
ಆದರೆ ಈ ಆನೆಮಂಙಳ ಮೌಲಾನರ ವಾಕ್ಸಮರಕ್ಕೆ ಅಧಿಕ ಆಯುಷ್ಯ ಇರಲಿಲ್ಲ.

1983 ಪ್ರಬ್ರವರಿಯಲ್ಲಾಗಿತ್ತು ಪ್ರಸಿದ್ಧವಾದ 'ಕೊಟ್ಟಪ್ಪುರಂ ಸಂವಾದ' ನಡೆಯುವುದು.
ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ನಡೆದ ಕೊನೆಯ ಸಂವಾದವಾಗಿತ್ತು ಅದು.
ಮರ್ಹೂಂ ಈ ಕೆ ಹಸ್ಸನ್ ಮುಸ್ಲಿಯಾರ್ ವಫಾತಾದಾಗ ಸುನ್ನಿಗಳ ಶಕ್ತಿಯೆಲ್ಲಾ ಕ್ಷಯಿಸಿತೆಂದು ಭಾವಿಸಿದ ಸಳಪಿಗಳು ಸುನ್ನಿಗಳನ್ನು ಬಹಿರಂಗ ಸಂವಾದಕ್ಕೆ ಆಹ್ವಾನಿಸಿದರು.
ಈ ಕೆ ಹಸ್ಸನ್ ಮುಸ್ಲಿಯಾರರ ಅಭಾವದ ಗೇಪ್ ಉಪಯೋಗಿಸಿ ಶಕ್ತವಾದ ಮುನ್ನಡೆ ನಡೆಸಬೇಕೆಂಬ ಕನಸು ಕಂಡಿದ್ದರು ಸಳಪಿಗಳು.
ಆದರೆ ಸಮಸ್ತದ ತೀರ್ಮಾನದಂತೆ ಶಂಸುಲ್ ಉಲಮಾರ ಆಶಿರ್ವಾದದೊಂದಿಗೆ ಕೊಟ್ಟಪ್ಪುರಂ ಸಂವಾದಕ್ಕೆ ನೇತ್ರತ್ವ ಕೊಟ್ಟ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ,ಸಳಪಿಗಳ ಪ್ರತಿಯೊಂದು ಪ್ರಶ್ನೆಗಳಿಗೂ ಮುಗುಳ್ನಗುತ್ತಾ ಮನೋಹರವಾಗಿ ಉತ್ತರಿಸಿ ವಹ್ಹಾಬಿಗಳ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿಬಿಟ್ಟರು.!
ಆವಾಗಲೇ ಸೋಲಿನ ಭೀತಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು!
ನಂತರ 'ಬಹಿರಂಗ ಸಂವಾದ' ಎಂಬ ಪದವೇ ಅವರಿಗೆ ಅಲರ್ಜಿಯಾಗಿತ್ತು.
ಕಾಂತಪುರಂ ಉಸ್ತಾದರ ಮುಂದೆ ನಮ್ಮ ಯಾವುದೇ ಪದ್ಧತಿ ನಡೆಯಲ್ಲವೆಂದು ಆಗಲೇ ಸಳಪಿಗಳು ಮನಗಂಡಿದ್ದರು.
ವಹ್ಹಾಬಿ ಆಶಯದಲ್ಲಿ ಸಿಲುಕಿದ್ದ ಪರಿಸರ ಪ್ರದೇಶದ ಹಲವು ಕುಟುಂಬಗಳು ಸುನ್ನತ್ ಜಮಾತ್ ಗೆ ಮರಳಿದವು!
ಕೊಟ್ಟಪ್ಪುರಂ ಸಂವಾದದೊಂದಿಗೆ ಕಾಂತಪುರಂ ಉಸ್ತಾದ್ ಸುನ್ನಿಗಳ 'ಹೀರೋ' ಆದರು.
ಉಸ್ತಾದರ ಬೆಳವಣಿಗೆ ಶಂಸುಲ್ ಉಲಮಾರವರ ಕಾರ್ಯಚಟುವಟಿಕೆಗಳ ಬಲವರ್ಧಿಸಿತು.
ಆವಾಗಲೇ ಶಂಸುಲ್ ಉಲಮಾ ಮತ್ತು ಎಪಿ ಉಸ್ತಾದರ ಮಧ್ಯೆ ಭಿನ್ನತೆ ಸೃಷ್ಟಿಸಿ ಪರಸ್ಪರ ಸಂಬಂಧ ಇಲ್ಲವಾಗಿಸುವ ಕುತಂತ್ರ ಹೆಣೆಯಲು ಶತ್ರುಗಳು ಆರಂಭಿಸಿದ್ದರು.

(ಮುಂದುವರಿಯುವುದು)

No comments:

Post a Comment