*ಶಂಸುಲ್ ಉಲಮಾ(ನ:ಮ) ಸಮಸ್ತ ಇಭ್ಬಾಗವಾಗುವ ಮುಂಚೆ ಮತ್ತು ನಂತರ*
———————————
✒✒ *ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ*✒✒
————————————
*ಭಾಗ ಒಂದು*
ಶಂಸುಲ್ ಉಲಮಾ ಈ ಕೆ ಅಬೂಬಕರ್ ಮುಸ್ಲಿಯಾರ್ (ನ:ಮ) ಜನನ 4/4/1914. ವಫಾತ್ 19/8/1996 ವಯಸ್ಸು 86.
ಸಮಸ್ತ ಇಬ್ಬಾಗವಾಗುವುದು 1989 ರಲ್ಲಿ.
ಅಂದರೆ ಚೇಳಾರಿ ವಿಭಾಗದೊಂದಿಗೆ ಸಂಶುಲ್ ಉಲಮಾರ ನಂಟು ಕೇವಲ 7 ವರ್ಷ ಮಾತ್ರ!
1926 ರಲ್ಲಿ ಸಮಸ್ತದ ರೂಪೀಕರಣ.ವರಕ್ಕಲ್ ಮುಲ್ಲಕ್ಕೋಯ ತಂಙಳ್ ಸ್ಥಾಪಕ ಪ್ರೆಸಿಡೆಂಟ್.ಮರ್ಹೂಮ್ ಪಾಂಙಿಲ್ AP ಅಹ್ಮದ್ ಕುಟ್ಟಿ ಮುಸ್ಲಿಯಾರ್ ಸಮಸ್ತದ ಧೀರ್ಘ ಕಾಲ ಸಕ್ರೇಟರಿ.
ಸಮಸ್ತ ಸ್ಥಾಪಿತ ಗುರಿ 'ಮುಬ್'ತದಿಅ್' ( ನೂತನವಾದಿ) ಗಳನ್ನು ಪ್ರತಿರೋಧಿಸುವುದರೊಂದಿಗೆ ಮುಸ್ಲಿಮ್ ಸಮೂಹದ ಸಾರ್ವತ್ರಿಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಅವರನ್ನು ಸರಿಯಾದ ರೀತಿಯಲ್ಲಿ ಕೊಂಡೊಯ್ಯುವ ನೇತ್ರತ್ವ.
1915 ರಲ್ಲಿ ಖಿಲಾಫತ್ ಗೆ ಬೆಂಬಲಿಸಿ ಮಲಪ್ಪುರದಲ್ಲಿ ಪಾಂಙಿಲ್ AP ಉಸ್ತಾದ್ ನಡೆಸಿದ ಪ್ರಮಾದ ಪ್ರಭಾಷಣ ಒಂದು ಉದಾಹರಣೆ ಮಾತ್ರ.
ಮರ್ಹೂಮ್ ಅಬ್ದುಲ್ ಬಾರಿ ಮುಸ್ಲಿಯಾರ್, ರಶೀದುದ್ದೀನ್ ಮುಸ್ಲಿಯಾರ್ ಆರಂಭ ಕಾಲದಲ್ಲಿ ಮಿಂಚಿದ ನಾಯಕರು.
ಒಂದು ಭಾಗದಲ್ಲಿ ವಹ್ಹಾಬಿಸಂಗೆ ವಿರುದ್ಧವಾಗಿ ಕಾರ್ಯಚರಿಸುತ್ತಿದ್ದಂತೆಯೇ ಮುಸ್ಲಿಮರ ಸಮಸ್ಯಗಳಿಗೂ ಸ್ಪಂದಿಸಿ ಪರಿಹರಿಸುವಲ್ಲಿಯೂ ಮಧ್ಯಸ್ಥ ವಹಿಸುತ್ತಿದ್ದರು.
1947 ಭಾರತ ಸ್ವತಂತ್ರವಾಯಿತು.
ಪಾಕಿಸ್ತಾನವೆಂಬ ಪ್ರತೇಕ ದೇಶ ಹುಟ್ಟಿದಾಗ ಮುಹಮ್ನದಾಲಿ ಜಿನ್ನಾ ಆರಂಭಿಸಿದ ಮುಸ್ಲಿಂ ಲೀಗ್ ಪಕ್ಷ ವನ್ನು ಭಾರತದಲ್ಲಿ ಮುಂದುವರೆಸಬೇಕೋ, ಬೇಡವೋ ಎಂಬ ವಿಷಯದಲ್ಲಿ ಚರ್ಚೆಯಾಯಿತು.
ಮರ್ಹೂಂ ಇಸ್ಮಾಈಲ್ ಸಾಹಿಬ್ ರವರ ಜೊತೆ ಜಿನ್ನಾ ರನ್ನು ಬೇಟಿಮಾಡಲು ವಹ್ಹಾಬಿ ನಾಯಕರಾದ KM ಮೌಲವಿ ಮತ್ತು ಇತರರು ಪಾಕಿಸ್ತಾನಕ್ಕೆ ಹೋಗುತ್ತಾರೆ.
ಭಾರತದಲ್ಲಿ ಮರ್ಹೂಂ ಇಸ್ಮಾಈಲ್ ಸಾಹೇಬರ ನೇತ್ರತ್ವದಲ್ಲಿ 'ಇಂಡ್ಯನ್ ಯೂನಿಯನ್ ಮುಸ್ಲಿಮ್ ಲೀಗ್' ರೂಪೀಕರಿಸಲಾಯಿತು.
ಮಲಬಾರಿನಲ್ಲಿ ವಹ್ಹಾಬಿಸಂನ ವಿಷಬೀಜ ಬಿತ್ತಿದ ಕೆ ಎಂ ಮೌಲವಿ, ಮಲಬಾರ್ ಮುಸ್ಲಿಂ ಲೀಗ್ ನ ವೈಸ್ ಪ್ರೆಸಿಡೆಂಟ್ ಆದರು.
ಮುಸ್ಲಿಂ ಲೀಗ್ ರೂಪೀಕರಣದೊಂದಿಗೆ ಮುಸ್ಲಿಮರ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ಮುಸ್ಲಿಂ ರಾಜಕೀಯ ಪಕ್ಷ ಉಂಟಾಯಿತೆಂಬ ನಿಟ್ಟಿನಲ್ಲಿ ಉಲಮಾಗಳು ಸಂತೋಷಗೊಂಡರು.
ಹಾಗಾಗಿಯೇ ಅವರಲ್ಲಿ ಅಧಿಕ ಮಂದಿಯೂ ದರ್ಸ್ ರಂಗ ಮತ್ತು ಇತರ ದೀನಿ ಚಟುವಟಿಕೆಗಳಲ್ಲಿ ತಲ್ಲೀನರಾದರು.
ಇದನ್ನು ಮನಗಂಡ ವಹ್ಹಾಬಿಗಳು ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷವನ್ನು ತಮ್ಮ ತೆಕ್ಕೆಯಲ್ಲಿ ಭಧ್ರವಾಗಿಸಿದರು.
1960 ರಲ್ಲಿ ಮೊತ್ತಮೊದಲ ಬಾರಿ ಕಾಂಗ್ರೆಸ್ ಮತ್ತು ಪಿ ಎಸ್ ಪಿ ಯೊಂದಿಗೆ ಸಖ್ಯ ಮಾಡಿ ಮುಸ್ಲಿಂ ಲೀಗ್ ಅಧಿಕಾರಕ್ಕೆ ಬಂತು. ಆದರೆ ನೆಹರು ರವರ ಕಾಂಗ್ರೆಸ್ ಲೀಗ್ ಗೆ ಮಂತ್ರಿ ಸ್ಥಾನ ನಿರಾಕರಿಸಿತು.
ಕೊನೆಗೆ ಮಾತುಕತೆ ನಡೆಸಿದ ಪರಿಣಾಮ ಸ್ಪೀಕರ್ ಸ್ಥಾನ ಲೀಗ್ ನ ಪಾಲಾಯಿತು.
ಲೀಗ್ ದಕ್ಕಿದ ಆ ಮಹತ್ತರ ಸ್ಥಾನವನ್ನು ಕಠಿಣ ವಹ್ಹಾಬಿಯಾದ ಸೀದಿ ವಕೀಲ್ ಹಾಜಿಗೆ ಕೊಡಲಾಯಿತು!
ಸಮಸ್ತ ನೇತರರಾದ ಪಾಂಙಿಲ್ AP ಅಹ್ಮದ್ ಕುಟ್ಟಿ ಮುಸ್ಲಿಯಾರ್ ಸಹಿತ ಹಲವರ ಮೇಲೆ ಕಳ್ಳಕೇಸ್ ದಾಖಲಿಸಿದ ಭೂಪನಾಗಿದ್ದ ಈ ಸೀದಿ ವಕೀಲ್!
1967 ರಲ್ಲಿ ಮುಸ್ಲಿಂ ಲೀಗ್ ಕಮ್ಯುನಿಷ್ಟ್ ಪಕ್ಷದೊಂದಿಗೆ ಸಖ್ಯ ಬೆಳೆಸಿ ಮಂತ್ರಿಸ್ಥಾನ ಗಳಿಸಿತು.
ಈ ಮಧ್ಯೆ ಸಂಶುಲ್ ಉಲಮಾ ಸಮಸ್ತದ ಕಾರ್ಯಚಟುವಟಿಕೆ ರಂಗದಲ್ಲಿ ಸಕ್ರಿಯರಾಗುತ್ತಾರೆ.
1950 ರಲ್ಲಿ 'ನಡಕ್ಕಾವ್' ನಲ್ಲಿ ವಹ್ಹಾಬಿಗಳ ವಿರುದ್ಧ ನಡೆಸಿದ ಖಂಡನೆ ಪ್ರಭಾಷಣದೊಂದಿಗೆ 'ಈಕೆ' ಎಂಬ ನಾಮ ಪ್ರಸಿದ್ಧಿ ಪಡೆಯುತ್ತದೆ.
ವಹ್ಹಾಬಿಗಳು ಶಂಸುಲ್ ಉಲಮಾರ ವರನ್ನು 'ಬೆಂಕಿಯುಂಡೆ' ಎಂದೇ ಕರೆಯುತ್ತಿದ್ದರು!
(ಮುಂದುವರೆಯುವುದು)➡
No comments:
Post a Comment