ಭಾಗ 02
ಶಂಸುಲ್ ಉಲಮಾ ಸಮಸ್ತ ಇಭ್ಭಾಗವಾಗುವ ಮುಂಚೆ ಮತ್ತು ನಂತರ
————-———————
✒✒ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ✒✒
---------------------------
ಶಂಸುಲ್ ಉಲಮಾ 1957ರಲ್ಲಿ ಮರ್ಹೂಮ್ ಪರವಣ್ಣ ಮುಹಿಯದ್ದೀನ್ ಕುಟ್ಟಿ ಮುಸ್ಲಿಯಾರ್ ಖಾಲಿ ಮಾಡಿದ ಹುದ್ದೆಯನ್ನು ಭರ್ತಿಮಾಡಿ ಸಮಸ್ತದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ.
ಸಾರ್ವಜನಿಕ ರಂಗದ ಸಮಸ್ಯೆಗಳನ್ನು ಮುಸ್ಲಿಮ್ ಲೀಗ್ ಕೈಗೆತ್ತಿಕೊಂಡು ಕಾರ್ಯಚರಿಸುವದರಿಂದಲೇ ಸಮಸ್ತದ ಆಲಿಂಗಳು ಆ ವಿಷಯದಲ್ಲಿ ಲೀಗ್ ಎಂಬ ರಾಜಕೀಯ ಪಕ್ಷದಲ್ಲಿ ಸಂಪೂರ್ಣವಾಗಿ ವಿಶ್ವಾಸ ಅರ್ಪಿಸಿದ್ದರು.
ಅದೇ ಸಮಯ ಮತ್ತೊಂದು ಕಡೆ ಲೀಗ್ ನೇತ್ರತ್ವ ಸ್ಥಾನದಲ್ಲಿರುವ ಸಳಪಿ ಗಳು ತಂತ್ರ ಪೂರ್ವಕವಾಗಿ ತಮ್ಮ ಅಜೆಂಡಾಗಳ ರೂಪುರೇಖೆ ಸಿದ್ಧಪಡಿಸಿ ಜಾರಿಮಾಡುತ್ತಿದ್ದರು!
1967ರ ಕಮ್ಯುನಿಷ್ಟ್ ಮಂತ್ರಿಮಂಡಲದಲ್ಲಿ ಲೀಗ್ ಗೆ ಎರಡು ಮಂತ್ರಿಗಳಿದ್ದರು.
ಕೃಷಿ ಮಂತ್ರಿ ಕೆ .ಆರ್ ಗೌರಿಯಮ್ಮ ಭೂ ಪರಿಷ್ಕರಣ ಬಿಲ್ ಜಾರಿಮಾಡಿದುದರ ಫಲವಾಗಿ ಪಟ್ಡಿಕ್ಕಾಡ್ ಜಾಮಿಅ ನೂರಿಯ ಸಹಿತ ಹಲವು ದೀನಿ ಸಂಸ್ಥೆಗಳ ಭೂಸೊತ್ತುಗಳು ಸಮುದಾಯದಿಂದ ಕೈತಪ್ಪುತ್ತದೆ.
ದೀನಿ ಸಂಸ್ಥೆಗಳನ್ನು ಪ್ರಸ್ತುತ ಭೂ ನಿಯಮದಿಂದ ಕೈಬಿಡಬೇಕೆಂದು ಅಹವಾಲು ನೀಡಲು ಹೋದ ಸಮಸ್ತ ಆಲಿಂಗಳನ್ನು ಲೀಗ್ ನ ಮಂತ್ರಿ ಗಳು ಪರಿಹಾಸ್ಯ ಮಾಡುತ್ತಾ ತಳ್ಳುತ್ತಾರೆ!
ಕಾರಣ ಸಲಪಿಗಳಿಗೆ ವಕ್ಫ್ ಸೊತ್ತು ನಾಶವಾಗುವ ಭಯ ಇರಲಿಲ್ಲ.
ಶಂಸುಲ್ ಉಲಮಾ ಮತ್ತು ಕೆಲವು ಆಲಿಂಗಳು ಮುಸ್ಲಿಂ ಲೀಗ್ ನ ವಹ್ಹಾಬಿಮಯದ ವಿರುದ್ಧ ಚಿಂತಿಸಲು ಮತ್ತು ಹೋರಾಡಲು ಆರಂಭಿಸಿದಾಗ ಅವರಿಗೆ ನಿರಂತರ ಆಕ್ಷೇಪ ಮತ್ತು ಆರೋಪ ಎದುರಿಸಬೇಕಾಗಿ ಬರುತ್ತದೆ.
ಕುಟ್ಟಿಮಾಳು ಅಮ್ಮ ಜೊತೆ ಕಾಂಗ್ರೆಸ್ ವೇದಿಕೆಯಲ್ಲಿ ಭಾಗವಹಿಸಿದ್ದು ಒಂದು ಉದಾಹರಣೆ ಮಾತ್ರ.
ಈ ಮಧ್ಯೆ ಸಳಪಿಗಳು ಹಲವು ಸುನ್ನಿ ಪಳ್ಳಿಗಳನ್ನು ಕಳ್ಳ ದಾಖಲೆಯ ಮೂಲಕ ಅವರ ಹೆಸರಲ್ಲಿ ರಿಜಿಸ್ಟ್ರಾರ್ ಮಾಡಿದ್ದರು!
ಕ್ಯಾಲಿಕಟ್ ಪಾಳಯಂ ಬಸ್ಟಾಂಡಿನ ಸಮೀಪವಿರುವ ಮುಹಿದ್ದೀನ್ ಶೈಖ್ ರವರ ಹೆಸರಿನಲ್ಲಿರುವ ಮೈದೀನ್ ಪಳ್ಳಿ ಒಂದು ಉದಾಹರಣೆ ಮಾತ್ರ.
ಮುಸ್ಲಿಮರ ಸ್ವಂತ ಪತ್ರವೆಂದು ಹೇಳಲ್ಪಡುತ್ತಿದ್ದ 'ಚಂದ್ರಿಕಾ' ದಿನ ಪತ್ರ ಸಳಪಿಮಯವಾಯಿತು.ಸಳಪಿ ನಾಯಕನಾದ ಕುಟ್ಠಿಶ್ಶೇರಿ ಮೌಲವಿಯನ್ನು ವಹ್ಹಾಬಿ ಫತ್ವ ಬರೆಯಲಿಕ್ಕಾಗಿ ನಿಯಮನ ಮಾಡಲಾಯಿತು!
79-80 ರ ಕಾಲಘಟ್ಟದಲ್ಲಿ ನೆಬಿದಿನಾಚರಣೆಯ ವಾರ್ತೆ ನೀಡುವುದಕ್ಕೆ ಪತ್ರದ ಸಂಪಾದಕ ಮಂಡಳಿ ನಿಷೇಧ ಹೇರಿತ್ತು.!
ಇದರ ವಿರುದ್ಧ ಸಮಸ್ತದ ಆಲಿಂಗಳಾದ ಕೆ ಕೆ ಅಬೂಬಕರ್ ಹಝ್ರತ್ ಮತ್ತು ಬಶಿರ್ ಮುಸ್ಲಿಯಾರ್ ಧ್ವನಿಯೆತ್ತಿದ್ದರು.
ಶಂಸುಲ್ ಉಲಮಾ ರವರ ಸಹೋದರ ಸುನ್ನತ್ ಜಮಾತಿನ ಹರಿಕಾರ ಈ ಕೆ ಹಸ್ಸನ್ ಮುಸ್ಲಿಯಾರ್ ವಫಾತ್ ಆದಾಗ ಚಂದ್ರಿಕಾ ಪತ್ರದ ಮುಖಪುಟದಲ್ಲಿ ಅವರ ವಿಕೃತವಾದ ಫೋಟೋವನ್ನು ಹಾಕಿ ಲಕ್ಷಾಂತರ ಸುನ್ನೀ ಸಮೂಹದ ಗಾಯದ ಮೇಲೆ ಬರೆ ಎಳೆದರು.
ಓರಿಯಂಟಲ್ ಅರಬಿಕ್ ಕಾಲೇಜ್ ಗಳೆಲ್ಲವನ್ನು ವಹ್ಹಾಬಿಗಳು ಕೈವಶಪಡಿಸಿದರು. ಶಾಲೆಯ ಅರಬಿಕ್ ಪಾಠಪುಸ್ತಕದಲ್ಲಿ ವಹ್ಹಾಬಿ ನೇತಾರ ವಕ್ಕಂ ಮೌಲವಿ, ಕೆ ಎಂ ಮೌಲವಿ ಮುಂತಾದವರ ಜೀವನ ಚರಿತ್ರೆಯ ಪಾಠವನ್ನು ಅಳವಡಿಸಿ ಸುನ್ನೀ ಮಕ್ಕಳು ವಹ್ಹಾಬಿ ಕಲಿಯುವಂತೆ ಮಾಡಿದರು!
ಅದೇ ಸಮಯ ಲೀಗ್ ನ ಅಧ್ಯಕ್ಷರು ಕೂಡಾ ಆಗಿದ್ದ ಮರ್ಹೂಂ ಭಾಫಕಿ ತಂಙಳ್ ರವರ ಕುರಿತು ಸಣ್ಣ ಪರಾಮರ್ಶೆ ಕೂಡಾ ಇರಲಿಲ್ಲ!
ನಂತರ ಕಾಂತಪುರಂ ಮತ್ತು ಸಂಶುಲ್ ಉಲಮಾ ರವರು ಜೊತೆ ಜೊತೆಯಾಗಿ ರಾಜಕೀಯ ಮೇದಾವಿತ್ವದ ವಿರುದ್ಧ ಹೋರಾಟ ಆರಂಭಿಸುತ್ತಾರೆ.
ಇದಕ್ಕೆ ವಿರುದ್ಧವಾಗಿ ಕೆಲವು ಸುನ್ನೀ ಪಂಡಿತರ ನೇತ್ರತ್ವದಲ್ಲಿ ಲೀಗ್ ವಿರುದ್ಧ MDP ಎಂಬ ಹೊಸ ರಾಜಕೀಯ ಪಕ್ಷ ಹುಟ್ಟುತ್ತದೆ.
(ಮುಂದುವರಿಯುವುದು)
No comments:
Post a Comment