*ಭಾಗ 03*
*ಶಂಸುಲ್ ಉಲಮಾ ಸಮಸ್ತ ಇಬ್ಭಾಗವಾಗುವ ಮುಂಚೆ ಮತ್ತು ನಂತರ*
————————————
✒✒ *ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ*✒✒
-----------------------------
MDP ಎಂಬ ಹೊಸ ರಾಜಕೀಯ ಪಕ್ಷದ ಪ್ರಥಮ ಪ್ರೆಸಿಡೆಂಟ್ ಶಂಸುಲ್ ಉಲಮಾರ ವಿರುದ್ಧ ಕಾರ್ಯಚರಿಸಿದ ನಾಟಿಗ ವಿ. ಮೂಸ ಮುಸ್ಲಿಯಾರಾಗಿದ್ದರು.
ಆದರೆ MDP ಯ ಸ್ಥಾಪಕ ಸಂಶುಲ್ ಉಲಮಾ ಆಗಿದ್ದಾರೆಂದು ಲೀಗ್ ಆರೋಪಿಸಿತ್ತು.
(ಚಂದ್ರಿಕಾ ದಿನ ಪತ್ರದಲ್ಲಿ MDP ಯ ಅಡೈಸರಿ ಬೋರ್ಡ್ ಚೇರ್ಮಾನ್ ಈ ಕೆ ಅಬೂಬಕರ್ ಮುಸ್ಲಿಯಾರ್ ಎಂದು ವಿಶ್ಲೇಷಿಸಲಾಗಿತ್ತು!)
ಇದೇ ಸಮಯ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಶಂಸುಲ್ ಉಲಮಾ ಈಕೆ ಉಸ್ತಾದರವರನ್ನು ಮಟ್ಟ ಹಾಕಲಿಕ್ಕಾಗಿ ಮಲಪ್ಪುರಂ ನಿಂದ ಒಂದು ಪಾಕ್ಷಿಕವನ್ನು ಆರಂಭಿಸಲಾಯಿತು.ಅದರ ಹೆಸರು 'ಮಾಪಿಳ್ಳ ನಾಡ್' ಮಲಪ್ಪುರಂ ಮುನ್ಸಿಪ್ಪಲ್ ಲೀಗ್ ಪದಾಧಿಕಾರಿ ಕಮ್ಮು ಮತ್ತು ಈಗಲೂ ಲೀಗ್ ನ ನಿರ್ದೇಶಕರಾದ ಎಂ ಎ ತಂಙಳ್ ಮಾಪಿಳ್ಳ ನಾಡ್ ಪತ್ರದ ಸಂಪಾದಕ ಮಂಡಳಿಯ ನೇತ್ರತ್ವ ವಹಿಸಿದವರು.
ಅತ್ಯಂತ ಕಠಿಣ ಮತ್ತು ಅಷ್ಟೇ ನೀಚವಾದ ಬಾಷೆ ಉಪಯೋಗಿಸಿ ಕಾಂತಪುರಂ ಮತ್ತು ಈಕೆ ಉಸ್ತಾದರ ವಿರುದ್ಧ ಲೇಖನ ಬರುತ್ತಿದ್ದವು.
ಮಾಪಿಳ್ಳ ನಾಡ್ ಪತ್ರದ ತಲೆಬರಹ ಸ್ಯಾಂಪಲ್ ಹೀಗಿತ್ತು
"ಮನುಷ್ಯನ್ ಅದಿಪದಿಚ್ಚಾಲ್ ಮೃಗಮಾಗುಂ ಮೃಗಂ ಅದಿಪದಿಚ್ಚಾಲ್ ಶಂಸುಲ್ ಉಲಮಾಯಾಗುಂ"
"ಈ ಜಾರ ಸಂತತಿ (ವೇಶ್ಯೆ ಸಂತತಿ) ಯುಡೆ ತಂದ ಏದ್??"
ಇವುಗಳು ಕೆಲವು ಉದಾಹರಣೆ ಮಾತ್ರ.
'ಮಾಪಿಳ್ಳ ನಾಡ್' ನ ಶೈಲಿ ಅತೀ ಕಠಿಣವಾಗಿ ಮುಂದುವರಿಯುತ್ತಿರುವಾಗಲೇ ಸಂಶುಲ್ ಉಲಮಾರಿಗೆ ಬೆಂಬಲ ಸೂಚಿಸುತ್ತಾ 'ಲೀಗ್ ಟೈಂಸ್ ' ಎಂಬ ಪತ್ರದ ಆಗಮನವಾಯಿತು.
ಮುಸ್ಲಿಂ ಲೀಗ್ ಅಂದು ಇಬ್ಭಾಗವಾಯಿತು.
ಮರ್ಹೂಂ ಸೈದ್ ಉಮರ್ ಬಾಫಖಿ ತಂಙಳ್,ಚೆರಿಯ ಮಮ್ಮು ಕೋಯ,ಎ.ವಿ ಅಬ್ದುರ್ರಹ್ಮಾನ್ ಹಾಜಿ, (ಇವರಿಬ್ಬರೂ ವಹ್ಹಾಬಿಗಳಾಗಿದ್ದರು)
ಪಿ ಎಂ ಅಬೂಬಕರ್, ಮಾಜಿ ಸ್ಪೀಕರ್ ಮೈದೀನ್ ಕುಟ್ಟಿ ಎಂಬ ಬಾವ ಹಾಜಿ,ಮುಂತಾದವರ ನೇತ್ರತ್ವದಲ್ಲಿ ನಡೆಸಲ್ಪಟ್ಟ ಪತ್ರವಾಗಿತ್ತು 'ಲೀಗ್ ಟೈಂಸ್'
ಇಂದು ಮುಸ್ಲಿಂ ಲೀಗ್ ನ ನೇತ್ರತ್ವ ಸ್ಥಾನದಲ್ಲಿರುವ ಸಿ.ಮೈದೀನ್ ಕುಟ್ಟಿ, ಅಬ್ದುರ್ರಹ್ಮಾನ್ ಕಲ್ಲಾಯಿ,ಮುಂತಾದವರು
'ವಿಮದ' ಲೀಗ್ ನ ಅಂದಿನ ಯುವಜನ ನಾಯಕರಾಗಿದ್ದರು.
ಸಂಶುಲ್ ಉಲಮಾರವರನ್ನು ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯ ದಿಂದ ಹೊರಹಾಕಿದಾಗ ಸಂಶುಲ್ ಉಲಮಾರವರನ್ನು ಬೆಂಬಲಿಸಿ ಲೀಗ್ ಹಲವು ಲೇಖನಗಳನ್ನು ಪ್ರಕಟಿಸಿತ್ತು.
ಬಾಪು ಹಾಜಿ ಎಂಬ ಧನಿಕ ತನ್ನ ಎಲ್ಲಾ ಸಂಪತ್ತನ್ನು ದಾನ ನೀಡಿ ನಿರ್ಮಿಸಿದ ಸಂಸ್ಥೆಯಾಗಿದೆ 'ಫೈಝಿ ಬಿರುದು ನೀಡುವ ಪಟ್ಟಿಕ್ಕಾಡ್ ಜಾಮಿಅ ಕಾಲೇಜ್.
ಆದರೆ ಅದು ಹೈದರಾಬಾದ್ ನ ನೂರಿಷ ತಂಙಳ್ ರವರ ಹೆಸರಿನಲ್ಲಾಗಿತ್ತು ದಾನ ನೀಡಿದ್ದು.ನಂತರ ನೂರಿಷಾ ತರೀಖತ್ ನಲ್ಲಿ ನ್ಯೂನತೆ ಕಂಡು ಬಂದಾಗ ಸಮಸ್ತದ ಆಲಿಂಗಳು ಆ ಕಳ್ಳ ತರೀಖತ್ ನ ವಿರುದ್ಧ ಸಮರ ಸಾರಿದರು.
ಪಟ್ಟಿಕಾಡ್ ಕಾಲೇಜ್ ಕಳ್ಳತರೀಖತ್ ನ ಶೈಖ್ ನೂರಿಷಾ ತಂಙಳ್ ರವರ ಹೆಸರಿನಲ್ಲಿರುವುದರಿಂದಲೇ ಅದಕ್ಕೆ ಜಾಮಿಅ 'ನೂರಿಯ್ಯ' ಎಂದು ಹೆಸರಿಡಲು
ವ್ಯವಸ್ಥೆ ಮಾಡಲಾಗಿತ್ತು.
ಆದರೆ ತಂತ್ರಪರವಾಗಿ ಸಂಶುಲ್ ಉಲಮಾ ಪಟ್ಟಿಕ್ಕಾಡ್ ಕಾಲೇಜನ್ನು ನೂರಿಷಾ ರವರ ಕೈಯಿಂದ ವಿಮೋಚನೆ ಗೊಳಿಸಿದರು.
1963 ರಿಂದ 1977 ರ ವರೆಗೆ ಪಟ್ಟಿಕ್ಕಾಡ್ ಜಾಮಿಅ ದ ಪ್ರಿನ್ಸ್ ಪಾಲ್ ಆಗಿ ಸಂಶುಲ್ ಉಲಮಾ ಮುಂದುರೆದರು.
ಆದರೆ ದುರದೃಷ್ಟವಶಾತ್ ಜಾಮಿಅ ದಿಂದ ಸಂಶುಲ್ ಉಲಮಾರವರನ್ನು ಹೊರದಬ್ಬಲಾಯಿತು.!
ಹಾಗಾಗಿ ಪ್ರಿನ್ಸಿಪಾಲ್ ಆಗಿದ್ದ ಸಂಶುಲ್ ಉಲಮಾ ಪೂಚಕ್ಕಾಡ್ ಹೋಗಿ ಕೇವಲ ಒಂದು ಮುದರ್ರಿಸ್ ಆದರು!
ಸಮಸ್ತದ ಅಧೀನ ಸಂಸ್ಥೆಯಾಗಿದ್ದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯದಲ್ಲಿ ಪ್ರತಿ ವರ್ಷ ಬೃಹತ್ತಾದ ವಾರ್ಷಿಕ ಸಮ್ಮೇಳನ ನಡೆಯುತ್ತಿದ್ದರೂ ಅಲ್ಲಿಗೆ ಸಂಶುಲ್ ಉಲಮಾರಿಗೆ ಪ್ರವೇಶ ಇರಲಿಲ್ಲ.
ಸಮಸ್ತದ ಕಾರ್ಯದರ್ಶಿಗೆ ಪಟ್ಟಿಕ್ಕಾಡ್ ಸಮ್ಮೇಳನಕ್ಕೆ ಆಹ್ವಾನ ನೀಡದೆ ದೂರಮಾಡಲಾಗಿತ್ತು!
(ಮುಂದುವರೆಯುದು)
No comments:
Post a Comment