Monday, October 9, 2017

ಭಾಗ 04

ಶಂಸುಲ್ ಉಲಮಾ 'ಸಮಸ್ತ' ಇಭ್ಬಾಗವಾಗುವ ಮುಂಚೆ ಮತ್ತು ನಂತರ
————————————
✒✒ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ✒✒
------------        ---------- 

ಉಮರ್ ಬಾಫಖಿ ತಂಙಳ್ ರವರ 'ವಿಮದ' ಲೀಗ್ ಪಕ್ಷದೊಂದಿಗೆ ಸಹಕರಿಸಿದಕ್ಕಾಗಿ ಶಂಸುಲ್ ಉಲಮಾರಿಗೆ ಪಟ್ಟಿಕ್ಕಾಡ್ ಬಿಡಬೇಕಾಯಿತು.
1977 ರಿಂದ ನಿರಂತರ 10 ವರ್ಷ ಶಂಸುಲ್ ಉಲಮಾರಿಗೆ ಪಟ್ಟಿಕ್ಕಾಡ್ ಜಾಮಿಅ ದ ಸಮ್ಮೇಳನದಲ್ಲಿ ಭಾಗವಹಿಸಿವುದಕ್ಕೆ ನಿಷೇಧ ಹೇರಲಾಗಿತ್ತು!
ಸಮಸ್ತದ ಪ್ರಧಾನ ಕಾರ್ಯದರ್ಶಿಗೆ ಸಮಸ್ತದ ಕಾಲೇಜ್ ನ ಸಮ್ಮೇಳನದಕ್ಕೆ ಪ್ರವೇಶ ಇಲ್ಲ.!
ಈ ಮಧ್ಯೆ ಸಮಸ್ತದ ಜೊತೆ ಕಾರ್ಯದರ್ಶಿಯಾದ KV ಕೂಟ್ಟನಾಡ್ ಮುಹಮ್ಮದ್ ಮುಸ್ಲಿಯಾರ್ ಕುರಾನಿಗೆ ಒಂದು ತರ್ಜುಮೆ ಬರೆದರು.ಅದು ವಿವಾದವಾಗಿತ್ತು. ತರ್ಜುಮೆ ವಿಷಯದಲ್ಲಿ ಶಂಸುಲ್ ಉಲಮಾ ಮತ್ತು KV ಮುಹಮ್ಮದ್ ಮುಸ್ಲಿಯಾರರ ನಡುವೆ ಜಟಾಪಟಿ ನಡೆಯಿತು.
ಒಂದು ವಿಭಾಗ ಪಂಡಿತರು ಕುರಾನ್ ತರ್ಜುಮೆ ಗೆ ಬೆಂಬಲಿಸಿ ಮುನ್ನೇರುತ್ತಾ ಇದ್ದರು.ಮತ್ತೊಂದು ಕಡೆ SYS ನ ಮುಖ ಪತ್ರವಾದ 'ಸುನ್ನೀ ವಾಯ್ಸ್' ನಲ್ಲಿ ಅದರ ಚೀಫ್ ಎಡಿಟರ್ ಸಹ ಆಗಿದ್ದ ಶಂಸುಲ್ ಉಲಮಾ ಕೆ ವಿ ಯವರ ಕುರಾನ್ ತರ್ಜುಮೆ ವಿರುದ್ಧ ನಿರಂತರ ಲೇಖನ ಬರೆಯುತ್ತಿದ್ದರು.
SYS ನ ಅಧ್ಯಕ್ಷರಾಗಿದ್ದ ಮರ್ಹೂಮ್ EK ಹಸ್ಸನ್ ಮುಸ್ಲಿಯಾರ್ KV ಯವರ ಕುರಾನ್ ತರ್ಜುಮೆ ವಿರುದ್ಧ ಒಂದು ಪುಸ್ತಕವನ್ನೇ ಹೊರತಂದರು.
ಮಲಪ್ಪುರಂ ಭಾಗದಲ್ಲಿರುವ ಪ್ರಮುಖ ಪಂಡಿತರು ಲೀಗ್ ಗೆ ಬೆಂಬಲವಾಗಿ ನಿಂತಿದ್ದರು.
ಅದೇ ಸಮಯ ಶಂಸುಲ್ ಉಲಮಾ,ತಾಜುಲ್ ಉಲಮಾ,ನೂರುಲ್ ಉಲಮಾ ಎಂ ಎ ಉಸ್ತಾದ್,ಚಿತ್ತಾರಿ ಹಂಝ ಮುಸ್ಲಿಯಾರ್,pkm ಅಂಡೋಣ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಂತಾದವರು ಲೀಗ್ ನಲ್ಲಿರುವ ವಹ್ಹಾಬಿ ಅಧಿಪತ್ಯದ ವಿರುದ್ಧ ಹೋರಾಟ ಆರಂಭಿಸಿದ್ದರು.
ಸುನ್ನೀ ಸಮ್ಮೇಳನಗಳು ಲೀಗ್ ನ ನಿಯಂತ್ರದಲ್ಲಿತ್ತು.ಪಟ್ಟಿಕ್ಕಾಡ್ ಸಮ್ಮೇಳನದಲ್ಲಿಯೂ ಸಮಸ್ತ ಆಲಿಂಗಳಿಗೆ ಯಾವುದೇ ಅಧಿಕಾರ ಇರಲಿಲ್ಲ.ಇದೆಲ್ಲವೂ ಅಧಿಕ ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು.
ಈ ಮಧ್ಯೆ ಕೊಂಡೋಟ್ಟಿ MLA ಸೀದಿ ಹಾಜಿ ಸಳಪಿಗಳ ಸಮ್ಮೇಳನವೊಂದರಲ್ಲಿ ಈ ರೀತಿ ಹೇಳಿದ " ಎಂಡೆ ಅವಸಾನ ತುಳ್ಳಿ ರಕ್ತಂ ವರೇ ಸುನ್ನಿಗಳ್ಕ್ ಎದುರಿಲ್ ಞಾನ್ ಪೋರಾಡುಂ!"
ಇದರ ವಿರುದ್ಧ ವ್ಯಾಪಕ ಪ್ರತಿಷೇಧ ವ್ಯಕ್ತವಾಯಿತು.
ಹಾಗಾಗಿಯೇ ಪುಳಿಕ್ಕಲ್ ಎಂಬಲ್ಲೊಂದು ಬೃಹತ್ತಾದ ಸುನ್ನೀ ಸಮ್ಮೇಳನವನ್ನು ಸಂಘಟಿಸಲಾಯಿತು.
ಶಂಸುಲ್ ಉಲಮಾ,ಈ ಕೆ ಹಸ್ಸನ್ ಮುಸ್ಲಿಯಾರ್,ವಾಣಿಯಂಬಲಂ ಅಬ್ದುರ್ರಹ್ಮಾನ್ ಮುಸ್ಲಿಯಾರ್,ಕೋಟುಮಲ ಅಬೂಬಕರ್ ಮುಸ್ಲಿಯಾರ್‍,ಕಾಂತಪುರಂ ಎಪಿ ಅಬುಬಕರ್.ಮುಸ್ಲಿಯಾರ್ ,ಎಂ ಎ ಬಶೀರ್ ಮುಸ್ಲಿಯಾರ್ ಮುಂತಾದ ಘಟಾನುಘಟಿ ದಿಗ್ಗಜ ಪಂಡಿತರು ಆ ಸಮ್ಮೇಳದಲ್ಲಿ ಭಾಗವಹಿಸಿದ್ದರು.
ಅಲ್ಲಿ ಶಂಸುಲ್ ಉಲಮಾ ತನ್ನ  ಪ್ರಭಾಷಣದಲ್ಲಿ ಹೀಗೆ ಹೇಳಿದರು
" ಒಬ್ಬ ಸಳಪಿ ಅಭ್ಯರ್ಥಿಯ ವಿರುದ್ಧ ಹಿಂದು ಅಭ್ಯರ್ಥಿ ನಿಂತಿದ್ದರೆ ಆ ಹಿಂದುವನ್ನು ಗೆಲ್ಲಿಸಿ,ಸಳಪಿಯನ್ನು ಸೋಲಿಸಿರಿ"
ಶಂಸುಲ್ ಉಲಮಾ ರವರ ಈ ಆಹ್ವಾನ ಸುನ್ನೀ ವಲಯದಲ್ಲಿ ಹೊಸ ಚೈತನ್ಯ ಮೂಡಿಸಿತು.

(ಮುಂದುವರೆಯುವುದು)

No comments:

Post a Comment