Monday, October 9, 2017

*ಭಾಗ 05*

*ಶಂಸುಲ್ ಉಲಮಾ 'ಸಮಸ್ತ' ಇಭ್ಬಾಗವಾಗುವ ಮುಂಚೆ ಮತ್ತು ನಂತರ*
————————————

✒✒ ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ✒✒
------------         ------------

" ಕೊನೆಯ ಹನಿ ರಕ್ತ ಬಾಕಿ ಇರುವವರೆಗೆ ಸುನ್ನಿಗಳ ವಿರುದ್ಧ ಹೋರಾಡುವೆ"
ಎಂಬ ಲೀಗ್ MLA ಮಾತು ಸಹಿತ ಹಲವು ಅಹಿತಕರ ಘಟನೆಯಿಂದ ರೋಸಿ ಹೋದ ನಮ್ಮ ಉಲಮಾಗಳು ಮತ್ತು ಕಾರ್ಯಕರ್ತರು ಇದಕ್ಕೊಂದು ಪರಿಹಾರ ಕಾಣಬೇಕೆಂದು ಚಿಂತಿಸತೊಡಗಿದರು.
ಇದೇ ದಯನೀಯ ಸ್ಥಿತಿ ಮುಂದುವರೆದರೆ ಇಸ್ಲಾಂ ದೀನ್ ಅಥವಾ ಸುನ್ನತ್ ಜಮಾತ್ ಈ ರಾಜ್ಯದಲ್ಲಿ ನಾಶವಾಗುವ ದಿನ ದೂರವಿಲ್ಲವೆಂಬ ಪ್ರಜ್ಞೆ ಎಲ್ಲಾ ಸುನ್ನಿಗಳಲ್ಲೂ ಮೂಡತೊಡಗಿತು.
ಇದಕ್ಕೊಂದು ಪರಿಹಾರ ಕಾಣಲೇ ಬೇಕೆಂಬ ಬೇಡಿಕೆ ಕಾರ್ಯಕರ್ತರು ನಿರಂತರವಾಗಿ ಮಂಡಿಸಿದಾಗ ಸಮಸ್ತ ನಾಯಕರಿಗೆ ಅದನ್ನು ಅವಗಣಿಸಲು ಸಾಧ್ಯವಾಗಲಿಲ್ಲ.
ಈ ಸಂಧರ್ಭದಲ್ಲಾಗಿತ್ತು 26-6-1979 ರಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಮುಶಾವರ ಕರೆದು ಅತೀ ಪ್ರಧಾನವಾದ ತೀರ್ಮಾನವೊಂದನ್ನು ಹೊರಡಿಸುತ್ತದೆ.
ಆ ತೀರ್ಮಾನ ಹಲವರ ನಿದ್ದೆಗೆಡಿಸಿತು!
ತೀರ್ಮಾನ ದ ಪೂರ್ಣ ರೂಪ ಇಲ್ಲಿ ಕೊಡುತ್ತಿದ್ದೇನೆ...
'ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಮತ್ತು ಅದರ ಪೋಷಕ ಸಂಘಟನೆಗಳು ರಾಜಕೀಯವಾಗಿ ಸಂಘಟಿಸುವುದಿಲ್ಲ...
ಆದರೆ ಸುನ್ನತ್ ಜಮಾತ್ ಮತ್ತು ಅದರ ಸಂಸ್ಥೆಗಳಿಗೆ ವಿರುದ್ಧವಾಗಿ ಕಾರ್ಯಚರಿಸುವ ಎಲ್ಲಾ ರಾಜಕರಣಿಗಳನ್ನು ಎದುರಿಸಿ ಅವರನ್ನು ಪರಾಭವ ಗೊಳಿಸುವ ಯುಕ್ತವಾದ ಕಾರ್ಯಚಟುವಟಿಕೆ ಸ್ವೀಕರಿಸುವೆವು ಎಂದು ತೀರ್ಮಾನಿಸಲಾಯಿತು'
(ಸಮಸ್ತ ಇಬ್ಬಾಗವಾಗುವ ಮುಂಚೆ ನಡೆದ ಸಮಸ್ತದ 60ನೇ ವಾರ್ಷಿಕ ಸಂಚಿಕೆಯ ಪುಟ 65 ರಲ್ಲಿ ಈ ತೀರ್ಮಾನ ನೋಡಬಹುದು)

(ಮುಶಾವರದಲ್ಲಿ ಕೈಗೊಂಡ ಈ ತೀರ್ಮಾನವನ್ನು ಶಂಸುಲ್ ಉಲಮಾ ಹೇಳುತ್ತಾರೆ KT ಮಾನು ಮುಸ್ಲಿಯಾರರಲ್ಲಿ ಬರೆದಿಡುಂತೆ ಆಜ್ಞಾಪಿಸುತ್ತಾರೆ.ಎಂದು ಎಪಿ ಉಸ್ತಾದ್ ಒಂದು ಪ್ರಭಾಷಣದಲ್ಲಿ ಹೇಳಿದ್ದನ್ನು ಸ್ಮರಿಸಬಹುದು)

7-10- 1979 ರಂದು ಪುನಃ ಸೇರಿದ ಮುಶಾವರದಲ್ಲಿ ಮತ್ತೊಂದು ತೀರ್ಮಾನ ಸಮಸ್ತ ಹೊರಡಿಸಿತು.
'ಸಮಸ್ತದ ರಾಜಕೀಯ ತೀರ್ಮಾನ ಕಾರ್ಯರೂಪಕ್ಕೆ ಇಳಿಸುವ ಭಾಗವಾಗಿ ರಾಜಕೀಯ ನಾಯಕರನ್ನು ಭೇಟಿಯಾಗಿ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದಿಂದ ಸುನ್ನೀಯೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದೆಂದು ಅವರನ್ನು ಎಚ್ಚರಿಸಲು ತೀರ್ಮಾನಿಸಲಾಯಿತು'

ಇದಕ್ಕಾಗಿ ಒಂದು ಸಬ್ ಕಮಿಟಿಯನ್ನು ಆಯ್ಕೆ ಮಾಡಲಾಯಿತು. ಕಮಿಟಿಗೆ ಆರಿಸಲ್ಪಟ್ಟವರ ಹೆಸರು ಇಂತಿದೆ.
1)ಟಿ.ಕೆ. ಮೈದೀನ್ ಕುಟ್ಟಿ ಮುಸ್ಲಿಯಾರ್
2)EK ಹಸ್ಸನ್ ಮುಸ್ಲಿಯಾರ್
3) KP ಮುಹಮ್ಮದ್ ಮುಸ್ಲಿಯಾರ್
4)ಮುಹಮ್ಮದ್ ಇಂಬಿಚ್ಚಿ ಮುಸ್ಲಿಯಾರ್.
ಈ ಮಹತ್ತರವಾದ ತೀರ್ಮಾನ ಕೈಗೊಂಡ ಸಂದರ್ಭದಲ್ಲಾಗಿತ್ತು ಕೇರಳದಲ್ಲಿ ಪಂಚಾಯತ್ ಚುನಾವಣೆ ಘೋಷಿಸುವುದು.
ಕೂಡಲೇ ಸಮಸ್ತ ಮುಶಾವರ ಮತ್ತು ಸ್ಟೇಟ್ ಕಮಿಟಿ ತುರ್ತು ಸಭೆ ಸೇರಿ ಕೆಳಘಟಕಗಳಿಗೆ ಸೆರ್ಕ್ಯೂಲರ್ ರವಾನಿಸಿದರು.
ಸೆರ್ಕ್ಯೂಲರ್ ನ ಒಂದನೇ ನಿರ್ದೇಶದಲ್ಲಿ ಹೀಗೆ ಹೇಳಲಾಗುತ್ತಿದೆ.
'ಆಡಳಿತ ವರ್ಗದಿಂದ ಸುನ್ನಿಗಳಾದ ನಾವು ಮತ್ತು ನಮ್ಮ ದೀನಿ ಸಂಸ್ಥೆಗಳು ಎದುರಿಸುತ್ತಿರುವ ದುಖಕರವಾದ ದಯನೀಯ ಅನುಭವಗಳು ಇರುವುದರಿಂದಲೇ, ನಾಡಿದು ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ನಿಲ್ಲುವ ವಹ್ಹಾಬಿ ಮೌದೂದಿ ಮತ್ತು ಅವರ ಬೆಂಬಲಿರನ್ನು(ಪಕ್ಷಾತೀತವಾಗಿ) ಪರಾಭವ ಗೊಳಿಸಬೇಕೆಂದು ಅಹ್ಲುಸ್ಸುನ್ನ ವಲ್ ಜಮಾತನ್ನು ಪ್ರತಿನಿಧಿಸುವ ಕೇರಳದ ಅಧಿಕೃತ ಸಂಘಟನೆಯಾದ ಸಮಸ್ತ ಜಂ ಇಯ್ಯತುಲ್ ಉಲಮಾ ಕೇರಳ ಮುಸ್ಲಿಂಗಳೊಂದಿಗೆ ಆಹ್ವಾನವಿತ್ತಿದೆ.
ಪ್ರಸ್ತುತ ಆಹ್ವಾನವನ್ನು ತಪ್ಪಾಗಿ ಚಿತ್ರೀಕರಿಸಿ ಮತ್ತು ವ್ಯಾಖ್ಯಾನಿಸಿ ಕಾರ್ಯಕರ್ತರ ನಡುವೆ ಗೊಂದಲ ಸೃಷ್ಟಿಸಲು ವಹ್ಹಾಬಿ ,ಜಮಾತೇ ಇಸ್ಲಾಮಿ ಮತ್ತು ಬೆಂಬಲಿಗರು ಶ್ರಮಿಸುತ್ತಿದ್ದಾರೆ.
ಕೇರಳದ ಬಹುಸಂಖ್ಯಾತ ಸುನ್ನಿಗಳ ಮತ ಗಳ ಮೂಲಕ ಆರಿಸಿ ಬರುವ ಅಭ್ಯರ್ಥಿಗಳು ಅಧಿಕಾರ ಬಂದ ನಂತರ ಅವರು ರಾಜಕೀಯ ಶಕ್ತಿ ಮತ್ತು ಪ್ರಭಾವ ಉಪಯೋಗಿಸಿ ಸುನ್ನಿಗಳನ್ನು ಮತ್ತು ಸುನ್ನಿಗಳ ದೀನಿ ಸಂಸ್ಥೆಗಳನ್ನು ಮಟ್ಟ ಹಾಕುವ ದಯನೀಯ ಸ್ಥಿತಿ ನಮ್ಮೆಲ್ಲರ ಅನುಭವ.
ಹಾಗಾಗಿ ಅದಕ್ಕಿರುವ ಪರಿಹಾರ ಮಾತ್ರ ಒಂದು ಮಾತ್ರ.
'ಸುನ್ನತ್ ಜಮಾತ್ ಗೆ ವಿರುದ್ಧವಾಗಿ ಕಾರ್ಯಚರಿಸುವ ಆಶಯದವರನ್ನು ಸೋಲಿಸಿ'
ಈ ತೀರ್ಮಾನ ಕೈಗೊಳ್ಳಲು ಸಮಸ್ತ ನಿರ್ಭಂದಿತವಾಗಿದೆ.
ಅದಲ್ಲದೆ ಯಾವುದಾದರೊಂದು ಪಕ್ಷವನ್ನು ಬಲಪಡಿಸಲೋ/ಪರಾಭವಗೊಳಿಸಲೋ ಅಥವಾ ಸಮಸ್ತ ಮತ್ತು ಪೋಷಕ ಘಟಕಗಳು ರಾಜಕೀಯಕ್ಕೆ ಧುಮುಕಲೋ ಅಲ್ಲ.
ಹಾಗಾಗಿ ಈ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿ ಅವರಲ್ಲಿ ಸರಿಯಾದ ಪ್ರಜ್ಞೆ ಮೂಡಿಸಲು ಸಹಾಯಕವಾಗುವ ಕನ್ವೆನ್ಶನ್,ಸಭೆ ಸಮಾರಂಭಗಳನ್ನು ಕರೆದು ಜಿಲ್ಲಾ ಮತ್ತು ತಾಲೂಕು ಕಮಿಟಿಗಳು ಕರೆಯುವ ಸಮಾರಂಭಗಳಲ್ಲಿ ಅಧಿಕ ಜನರು ಪಾಲ್ಗೊಳ್ಳುವಂತೆ ಮಾಡಲು ಶಾಖೆಯ ಪದಾಧಿಕಾರಿಗಳು, ಮುಅಲ್ಲಿಂ ಗಳು ಶ್ರಮಿಸಬೇಕೆಂದು ಅಪೇಕ್ಷಿಸುತ್ತೇವೆ.(ಸೆರ್ಕ್ಯೂಲರ್)

ಈ ಸೆರ್ಕ್ಯೂಲರ್ ಕೆಳಘಟಕಕ್ಕೆ ತಲುಪಿದ ಕೂಡಲೇ ಪಂಚಾಯತ್ ಚುನಾವಣೆ ಆರಂಭಿಸುತ್ತದೆ.ಸುನ್ನೀ ಕಾರ್ಯಕರ್ತರು ಸಿಕ್ಕಿದ ಛಾನ್ಸನ್ನು ಚೆನ್ನಾಗಿ ಉಪಯೋಗಿಸಿದರು.ಪರಿಣಾಮ ಸಳಪಿಗಳಾದ ಲೀಗ್'ನ ಘಟಾನುಘಟಿ ನಾಯಕರು ದಾಖಲೆ ಮತಗಳಿಂದ ಜಯಿಸಿದ ಸ್ಥಳಗಲ್ಲಿ ಕೂಡಾ ಸೋತು ಸುಣ್ಣವಾದರು!
ಇದು ಲೀಗ್ ನ ನಾಯಕರನ್ನು ದಂಗುಬಡಿಸಿತು!
ನಂತರದ್ದು ಲೀಗ್ ಗೆ ನಿದ್ದೆಯಿಲ್ಲದ ದಿನಗಳಾಗಿತ್ತು!

(ಮುಂದುವರೆಯುವುದು)

No comments:

Post a Comment